Sunday, December 30, 2012

ಮೈಸೂರು ಮಲ್ಲಿಗೆ -- Play Review

ಯಾರ್ಗೋಸ್ಕ್ರ ಬರೀಬೇಕು? ಏನ್ ಬರೀಬೇಕು? ಕೆ.ಎಸ್.ನ ಅವ್ರ ಕವಿತೆಗಳು, ಈ ನಾಟ್ಕ ಎರ್ಡೂ ಸಕ್ಕತ್ famous. ಸಾಲದ್ದಕ್ಕೆ ಇದೆ ಹೆಸ್ರಲ್ಲಿ picture ಕೂಡ ಬಂದಿದೆ. ಇನ್ನ ನಾನೇನ್ ಹೊಸಾದ್ ಬರ್ಯೋದು? ಇರ್ಲಿ, ಬರ್ಯೋಣ, ಆದ್ರೆ ನನ್ನ ಯಾವಾಗ್ಲೂ ಮಾಡೋ ಹಾಗೆ ಈ ಸರ್ತಿ Dramadose ನಲ್ಲಿ ಹಾಕೋದ್ ಬೇಡ, ನನ್ನ ಸ್ವಂತ blogನಲ್ಲಿ ಹಾಕೋಣ ಅಂತ decide ಮಾಡ್ದೆ.

ಕನ್ನಡದಲ್ಲಿ ಬರೀಬೇಕಾ ಅಥ್ವಾ Englishಆ? ಅಥ್ವಾ ಕನ್glish try ಮಾಡಿದ್ರೆ ಹೇಗೆ ಅಂತಾ ಅನ್ಸಿ ಅಂತೂ ಈ reviewನ ಶುರು ಮಾಡೇಬಿಟ್ಟೆ.

ನಾನ್ ಈ ನಾಟ್ಕಾನ ಐದು ಸರ್ತಿ ನೋಡಿದೀನಿ... chance ಸಿಕ್ರೆ ಮತ್ತೆ ನೋಡ್ತೀನಿ. ಆದ್ರೆ ಇದ್ವರ್ಗೂ ಯಾವತ್ತೂ disappoint  ಆಗಿಲ್ಲ. Bore ಅಂತಾ ಅನ್ಸಿಲ್ಲ. ಯಾಕೆ?
ಮೈಸೂರು ಮಲ್ಲಿಗೆ ಪ್ರೇಮ ಕವಿ ಕೆ.ಎಸ್ ನರಸಿಂಹಸ್ವಾಮಿ ಅವ್ರ ಕವನಗಳ್ನ base ಆಗಿ ಇಟ್ಕೊಂಡು ಹೆಣೆದ ನಾಟ್ಕ. ನಾನೇನ್ ಕೆ.ಎಸ್ ನರಸಿಂಹಸ್ವಾಮಿ ಅವ್ರ ಅಭಿಮಾನಿ ಅಲ್ಲ. ಬೇರೆಯವ್ರ ಕವನ ಹಾಡಿನ್ ರೂಪ್ದಲ್ಲಿ ಬಂದ್ರೆ ಹೇಗೆ ಕೇಳ್ತೀನೋ ಹಾಗೆ ಇವ್ರ ಕವನಗಳನ್ನೂ ಕೇಳ್ತೀನಿ, ಅಷ್ಟೆ.
ಆ ನಾಟ್ಕದಲ್ಲಿ ನನ್ friends ಯಾರಾದ್ರೂ ಇದಾರ, ಬಿಟ್ಟಿ pass ಸಿಗುತ್ತೆ ಹೋಗಿ ನೋಡೋಣ ಅನ್ನೋಕೆ? ಇಲ್ಲ, ಅದೂ ಇಲ್ಲ.
ಹೋಗ್ಲೀ ಇದೇನಾದ್ರೂ Stand up comedy ನಾ? ಪ್ರತಿ ಸರ್ತಿನೂ ಏನಾದ್ರೂ ಹೊಸಾದಿರುತ್ತೆ ಅನ್ನೋಕೆ? ಅದೂ ಅಲ್ಲ. ಹಾಗಾದ್ರೆ ಇನ್ನೇನು?

ಮೊದಲ್ನೇ ಕಾರ್‍ಣ - ಬಳೆಗಾರ ಚೆನ್ನಯ್ಯ. ಒಬ್ಬ middle aged ವ್ಯಕ್ತಿ (ಮುಂಚೆ ರ್‍ಆಜೇಂದ್ರ ಕಾರಂತ, ಈಗ ಪ್ರವೀಣ್) ಸುಮಾರು ಎಪ್ಪತ್ ವರ್ಷದ್ ಮುದ್ಕನ್ levelಗೆ  voice modulation ಮಾಡೋದು, ಅದೂ full two hours. ಬರಿ ಮಾತಾಡೋದ್ ಅಲ್ಲ, ಹಾಡ್ ಕೂಡ ಹಾಡ್ತಾರೆ, ಅದೆ voiceನಲ್ಲಿ. Films ನೋಡೋವ್ರಿಗೆ ಕಮಲಾ ಹಸನ್, ವಿಷ್ಣುವರ್ಧನ್, ಸೂರ್ಯ, ಎಲ್ಲಾರೂ ಇಂಥ ಪಾತ್ರಗಳ್ನ ಮಾಡಿದಾರೆ, ಇದೇನ್ ಮಹಾ ಅನ್ಸ್ಬಹುದು. ಆದ್ರೆ ಇವ್ರೆಲ್ಲಾರ್ನೂ ಆ ಪಾತ್ರಾನ, retakes ಇಲ್ದೆ ಮಾಡೋಕ್ ಹೇಳಿ. ಆಗ ತಿಳ್ಯುತ್ತೆ ಇದು ಎಷ್ಟ್ ಕಷ್ಟ ಅಂತ. ಆದೂ ಅಲ್ದೇ filmsನಲ್ಲಿ mostly sound engineer ಕೈವಾಡ ಕೂಡ ಇರುತ್ತೆ, ಇಲ್ಲಿ ಏನೂ ಇಲ್ಲ.  Pure  talent and nothing else.

ಎರ್ಡ್ನೇ ಮತ್ತೆ ಮೂರ್‍ನೇ ಕಾರ್‍ಣ - ಹಾಡುಗ್ಳು ಮತ್ತೆ ಸನ್ನಿವೇಶಗಳು. ಇವೆರ್ಡನ್ನೂ ಯಾಕೆ combine ಮಾಡ್ದೆ ಅಂದ್ರೆ ಇದು ಹಾಡುಗಳ ಮಧ್ಯೆ ಸನ್ನಿವೇಶಗ್ಳು ಇರೋ ನಾಟ್ಕ. ಹಾಗಂದ ಮಾತ್ರಕ್ಕೆ ಇಲ್ಲಿ ಹಾಡು ಹೂವು, ಕಥೆ ನಾರು ಅಂತಲ್ಲ. ಹಾಡುಗಳು ಮಲ್ಲಿಗೆ ಹಾರ ಆದ್ರೆ, ಕಥೆ ಮಲ್ಲಿಗೆ ಮಧ್ಯೆ ಬಂದು ಹಾರಕ್ಕೆ ಶೋಭೆ ತರೋ ರೋಜಾ ಹೂ. ಈ ಕವನ ಸಂಕಲನವನ್ನ ನಾಟ್ಕದ ರೂಪಕ್ಕೆ ತಂದ ರಾಜೇಂದ್ರ ಕಾರಂತ್ ಅವ್ರು ಸುಮ್ನೆ ಕೆ.ಎಸ್.ನ ಅವ್ರ popular ಹಾಡುಗ್ಳನ್ನ ಆಯ್ಕೆ ಮಾಡ್ಕೊಂದು ಕಥೆ ಹೆಣ್ದಿಲ್ಲ. ಕೆ.ಎಸ್.ನ ಅವ್ರ ಜೀವನಾನ ಸ್ವಲ್ಪ ಮಟ್ಟಿಗೆ ಪರಿಚಯ ಮಾಡ್ಸೋಕೆ ಯಾವ ಹಾಡು ಅನ್ಕೂಲ ಆಗುತ್ತೋ ಅದನ್ನ ಮಾತ್ರ ಆಯ್ಕೆ ಮಾಡ್ಕೊಂಡಿದಾರೆ. ಅದಕ್ಕೆ ಹಾಡುಗ್ಳು contextual ಅಗಿದ್ದು, ಎಲ್ಲೂ force fit ಅನ್ಸೊಲ್ಲ.

ಅದೂ ಅಲ್ದೆ ಈ ಎಲ್ಲ ಹಾಡುಗಳು ನಮ್ಮ ಜೀವನಕ್ಕೂ ಅನ್ವಯ ಆಗುತ್ತೆ ಅನ್ಸುತ್ತೆ. ಉದಾಹರಣೆಗೆ, ಮದ್ವೆ ಆಗಿ ಗಂಡನ್ ಮನೇಗ್ ಸುಮ್ನೆ ಅತ್ಕೊಂಡ್ ಹೋಗೋಕಿಂತ, ದಾರೀಲ್ ಹೋಗ್ಬೇಕಾದ್ರೆ ಗಂಡ ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ ಅಂತ ಕೇಳ್ದಾಗ, ಹೆಂಡ್ತಿ ನಮ್ಮೂರ ಮಂಚದಲಿ ನಿಮ್ಮೂರ ಕನಸಿರಲು ವಿಸ್ತರಿಸಿ ಹೇಳಬೇಕೆ ಅಂದ್ರೆ ಹೊಸ ಹುಡ್ಗಿ ಹೊಂದ್ಕೊಂಡ್ ಹೋಗ್ತಾಳಾ ಅನ್ನೋ doubt ಬರೊಲ್ಲ.  ಹಾಗೆ, ಹುಡ್ಗಿ ನೋಡೋಕ್ ಬಂದಾಗ್ಲೋ ಅಥ್ವಾ, ಮದ್ವೆ fix ಆದ್ಮೇಲೆ ಹೆಣ್ಣಿನ್ ಜೊತೆ parkನಲ್ಲಿ ಕೂತಿದ್ದಾಗ, ಅಂತಿಂಥ ಹೆಣ್ಣು ನೀನಲ್ಲ, ನಿನ್ನಂಥ ಹೆಣ್ಣು ಇನ್ನಿಲ್ಲ ಅಂತ ಹಾಡ್ದಾಗ ಯಾವ್ ಹೆಣ್ಣು ತಾನೆ ನಾಚ್ಕೊಳೊಲ್ಲ. ಇನ್ನ, ರಾಯರು ಬಂದರು ಮಾವನ ಮನೆಗೆ ಹಾಡಿನ್ ಬಗ್ಗೆ ಹೇಳೋದೆ ಬೇಡ. ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ ಹಾಡು ಆಷಾಡ್ ಮಾಸ್ದಲ್ಲಿ ಅಮ್ಮನ್ ಮನೇಗ್ ಹೋದ್ ಪ್ರತಿ ಹೆಂಡ್ತೀಗೂ apply ಆಗುತ್ತೆ. ಅತ್ತಿತ್ತ ನೋಡದಿರು, ಅತ್ತು ಹೊರಳಾದದಿರು ಅಂತಾ ಹಾಡಿದ್ರೆ ಬಹುಶಃ ಎಂಥಾ ಗಲಾಟೆ ಮಾಡ್ತಿರೋ ಮಗೂನೂ ಆರಾಮಾಗ್ ನಿದ್ದೆ ಮಾಡುತ್ತೆ. ಇನ್ನ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಅಂತ ಗಂಡ ಹಾಡಿದ್ರೆ, ಹೆಂಡ್ತೀರೆಲ್ಲ full ಖುಶ್! (ಕೆಲವು ಹೆಂಡ್ತೀರು ಹಾಗಾದ್ರೆ ಎಷ್ಟು ಕೋಟಿ ಇಟ್ಟಿದೀರ ಅಂತಾ ಕೇಳ್ಬಹುದು, ಹುಷಾರು ;) ) ಹಾಗೆ, ವಯ್ಯಸ್ಸಾದ್ ಮೇಲೆ, ಗಂಡಂಗೆ ಹೆಂಡ್ತಿ ಆತ ಅವ್ಳಿಗೋಸ್ಕ್ರ ಬರ್ದಿದ್ ಹಳೆ ಹಾಡನ್ನ ಮತ್ತೆ ಹಾಡೋಕ್ ಹೇಳ್ದಾಗ, ಗಂಡನ್ ಕಣ್ಣಲ್ ಮಾತ್ರ ಅಲ್ಲ, ಅದ್ನ ನೋಡ್ತಾ ಇರೋ ನಮ್ಗಳ ಕಣ್ಣಲ್ಲೂ ಒಂದ್ ಹನಿ ಆನಂದಬಾಷ್ಪ ಬಂದ್ರೆ ಆಶ್ಚರ್ಯ ಇಲ್ಲ.

ನಾನು ಈ ಹಾಡುಗಳ್ನ ಎಷ್ಟೋ ಸರ್ತಿ ಕೇಳಿದೀನಿ, ಕೇಳೋವಾಗ ನಾನು ಕೆಲವು ಸರ್ತಿ visualize ಕೂಡ ಮಾಡ್ಕೊಂಡಿದೀನಿ, ಆದ್ರೆ ಅದಕ್ಕೆ ಜೀವ ಕೊಟ್ಟಿದ್ದು ಈ ನಾಟ್ಕ. ಈ ವಿಷ್ಯದಲ್ಲಿ ಕಲಾಗಂಗೋತ್ರಿ ತಂಡದವ್ರು ಮಾಡಿರೊ ಇನ್ನೊಂದು ಒಳ್ಳೆ ಕೆಲ್ಸ ಅಂದ್ರೆ ಹಾಡುಗ್ಳಲ್ಲಿ ಅಶ್ವಥ್, ಮೈಸೂರು ಅನಂತಸ್ವಾಮಿ ಇವ್ರಗಳ  version retain ಮಾಡಿರೋದು.

ನಾಲ್ಕ್ನೆ ಕಾರ್‍ಣ - ಪಾತ್ರಧಾರಿಗಳು. ಈ ನಾಟ್ಕ ಕೆ.ಎಸ್.ನ ಅವ್ರ ಯೌವ್ವನದಿಂದ ಶುರು ಆಗಿ ವೃದ್ಧಾಪ್ಯದವರ್ಗೂ ಅವ್ರ ಜೀವನದಲ್ಲಿ ಆಗೋ ಘಟಣೆಗಳನ್ನ ತೋರ್ಸುತ್ತೆ. ಹೀಗಾಗಿ ಇದ್ರಲ್ಲಿ ಕೆ.ಎಸ್.ನ ಅವ್ರ ಪಾತ್ರ ಮಾಡೋವ್ರು ಮೂರ್ ಜನ -- ಯುವಕನ ಪಾತ್ರಧಾರಿ ಹೆಸ್ರು ಮರ್ತಿದೀನಿ, ಮಧ್ಯವಯಸ್ಕ ಕೆ.ಎಸ್.ನ - ಕಲಾಗಂಗೋತ್ರಿ ಕಿಟ್ಟಿ, ವೃದ್ಧ ಕೆ.ಎಸ್.ನ ಸ್ವತಃ ಬಿ.ವಿ.ರಾಜಾರಾಂ. ಅವ್ರ ಹೆಂಡ್ತಿ ಪಾತ್ರ ಮಾಡೋವ್ರು ಇಬ್ರು -- ನವ ವಧು ಆಗಿ ಸೌಮ್ಯ, ನಂತರ ಜೀವನದ ಪಾತ್ರಧಾರಿ ವಿದ್ಯಾ. ಜೊತೆಗೆ ಅವ್ರ ಸುತ್ತ ಮುತ್ತ ಬರೋ supporting artists ಸುಮಾರು 8-10 ಜನ. ಇವ್ರೆಲ್ಲ ಅವ್ರ್-ಅವ್ರ ಪಾತ್ರಗಳ್ನ ಎಷ್ಟ್ ಚೆನ್ನಾಗ್ ನಿಭಾಯ್ಸ್ತಾರೆ ಅಂದ್ರೆ, ಯಾರು ಹೆಚ್ಚು ಚಪ್ಪಾಳೆ ಗಿಟ್ಟಿಸ್ತಾರೆ ಅನ್ನೋದಕ್ಕೆ ಅವ್ರಲ್ಲೇ ಏನೋ ಒಂಥರ healthy competition ಇದ್ಯೇನೋ ಅನ್ಸುತ್ತೆ. ಉದಾಹರಣೆಗೆ ಎಲೆ-ಅಡ್ಕೆ ಹಾಕೋ ಮಾವ. ಆ ಪಾತ್ರ stage ಮೇಲೆ ಇರೋದು ಸುಮಾರ್ ಮೂರ್ ನಿಮಿಷ ಅನ್ಸುತ್ತೆ. ಆದ್ರೆ ಅಷ್ಟ್ರಲ್ಲೆ ಅವ್ರು ತಮ್ಮ ಮಾತಾಡೋ ಶೈಲಿ ಮೂಲ್ಕ audience mindನಲ್ಲಿ print ಹಾಕ್ ಹೋಗ್ತಾರೆ. ಅದೇ ರೀತಿ marriage broker-cum-ಪುರೋಹಿತ. stage ಮೇಲೆ ಇರೋದ್ ಎರ್ಡೇ ನಿಮಿಷ ಆದ್ರು ಅಷ್ಟ್ರಲ್ಲಿ audienceನ ನಗ್ಸಿ ಹೋಗ್ತಾರೆ.

ಹೀಗೆ, ಒಂದು ನಾಟ್ಕದ ಪ್ರತಿಯೊಂದು ಅಂಶ ಕೂಡ A class ಆಗಿರೋದು ಬಹಳ ಅಪ್ರೂಪ. ಆದ್ರೆ ಇದನ್ನ ಕಲಾಗಂಗೋತ್ರಿ ತಂಡ ಸಾಧ್ಸಿದೆ. ಅದಕ್ಕೆ  proof ಅಂದ್ರೆ ಈ ನಾಟ್ಕದ 148ನೇ ಪ್ರದರ್ಶನದಲ್ಲೂ ಇವ್ರಿಗೆ ಸಿಗೋ standing ovation.  ಈ ನಾಟ್ಕ ನಿಮ್ಮೂರ್ಗೆ ಬಂದ್ರೆ ಖಂಡಿತಾ miss ಮಾಡ್ಕೊಬೇಡಿ.