ಮಳೆನಂತೆ?
ಬಟಾ-ಬಟಾ ಬಿಸ್ಲಿನ ಮಧ್ಯೆ ಆಕಸ್ಮಿಕವಾಗಿ ಬಿದ್ದ ಮಳೆ ನಿಮಗೆಲ್ಲ ಖುಷಿ ಕೊಟ್ಟಿದೆ ಅಂದ್ಕೊಂಡಿದೀನಿ...
ನಾನು ಮುಂಚಿಂಥರಾನೆ ಹೆಚ್ಚು-ಕಮ್ಮಿ ಆರಾಮಗಿಲ್ಲ... ಬರಿ ಕಮ್ಮಿ ಆರಾಮಾಗಿದೀನಿ... ಯಾಕಂದ್ರೆ ನಂಗೆ ಈ ವಾರ ಪೂರ್ತಿ ಹುಷಾರಿಲ್ಲ... ಸ್ವಲ್ಪ ಜ್ವರ, ನೆಗ್ಡಿ... ಸುಧಾರ್ಸ್ಕೊಳೋಕೆ ಪುರ್ಸೊತ್ತಿಲ್ಲ.
ಈ ಸರ್ತಿ ಪತ್ರದಲ್ಲಿ ನಾನು ಬೇಕಾದ್ದಂಗೆ English words use ಮಾಡಿದೀನಿ... ಈಗ ನೇರವಾಗಿ ವಿಷ್ಯಕ್ಕೆ ಬರ್ತೀನಿ...
ನಾವು ಹೋದ್ವಾರ ನಮ್ಮ guesthouse ಹತ್ರ ಇರೋ Heidelberg ಮತ್ತು Mannheim ಅನ್ನೋ ಸ್ಥಳಗಳಿಗೆ ಹೋಗಿದ್ವಿ... ಈ ಜಾಗಗಳನ್ನ ಆಯ್ಕೆ ಮಾಡ್ಕೊಳೋಕೆ ಕೆಲವು ಕಾರಣಗಳಿದ್ವು...
೧. ನಮಗೆ ಬೇರೆ ದೇಶ ನೋಡೋಕೆ ಉತ್ತಮ ದರದಲ್ಲಿ ಯಾವದೇ option ಸಿಗ್ಲಿಲ್ಲ...
೨. ನಾವು ಇಲ್ಲಿ ಇನ್ನು ಏನೂ shopping ಮಾಡಿರ್ಲಿಲ್ಲ
೩. Heidelbergನಲ್ಲಿ ಭಾರತೀಯ ಉಪಹಾರಮಂದಿರಗಳು ಬಹಳಷ್ಟಿವೆ ಅಂತ ಕೇಳಿದ್ವಿ...
Heidelberg: Heidelberg ಒಂದು ಪುಟ್ಟ ನಗರ. ಸುತ್ತಲೂ ಹಸಿರು ಬೆಟ್ಟ, ಒಂದು ಕಡೆ Neckar ನದಿ ಹೊಂದಿರುವ ಈ ಸ್ಥಳ ತುಂಬ ಚೆನ್ನಾಗಿದೆ ... ಅಲ್ಲಿ ಹೋಗ್ತಿದ್ದಂಗೆ ನಮ್ಗೆ ನಮ್ಮ ಜೊತೇಲೇ ಕೆಲ್ಸ ಮಾಡೋ ಇನ್ನೊಂದು Wipro ತಂಡ ಸಿಕ್ತು, ಅವ್ರೆಲ್ಲಾ ಕೆಲವು electronic items ತಗೊಳೋಕೆ ಹೊರ್ಟಿದ್ರು, ನಾವು ಅವ್ರ ಜೊತೇಲಿ ಹೋದ್ವಿ, ಆದ್ರೆ ನಮ್ಗೆ ಎಲ್ಲದರ ಬೆಲೆ ಜಾಸ್ತಿ ಅನ್ನಿಸ್ತು, ಏನೂ ತಗೊಳ್ದೇ ಜಾಗ ಖಾಲಿ ಮಾಡೋವಾಗ ಅವ್ರು ನಮಗೆ ಇಲ್ಲಿ ರಾಜ ರಾಣಿ ಅನ್ನೋ ಭಾರತೀಯ ಉಪಹಾರಮಂದಿರದಲ್ಲಿ ಊಟ ತುಂಬಾ ಚೆನ್ನಾಗಿರುತ್ತೆ ಅಂದ್ರು... ಸರಿ ನೋಡೋಣ ಅಂತ ಅಲ್ಲಿ ಹೋದ್ರೆ ನಮ್ಗೆ ಸಿಕ್ಕಿದ್ದು German ಶೈಲಿಯಲ್ಲಿ ಮಾಡಿದ ಭಾರತೀಯ ತಿಂಡಿ.. ಅಂದ್ರೆ, ಸಪ್ಪೆ ಪಾಲಾಕ್ ಪನೀರ್ (ಅದು ಚೆನ್ನಾಗಿ ಮಸಾಲೆ ಇರ್ಬೇಕು, ಖಾರ್-ಖಾರ್ವಾಗಿರ್ಬೇಕು ಅಂತ ಹೇಳಿದ್ಮೇಲೆ ಈ ಗತಿ, ಹೇಳಿರ್ಲಿಲ್ಲ ಅಂದ್ರೆ ಇನ್ನೇನ್ ಆಗ್ತಿತ್ತೋ?!!!). Fridge ಇಂದ ತೆಗೆದು ಬಿಸಿ ಮಾಡಿದ fish curry... ಎಲ್ಲಕ್ಕಿಂತಾ ಮುಖ್ಯವಾಗಿ ಬೆಣ್ಣೆ, cheese ಬೆರೆಸಿದ tomato soup... ನಿಜವಾಗಲೂ ಇದನ್ನಾ ನಮ್ಮವ್ರೆಲ್ಲ ಅಷ್ಟು ಹೊಗ್ಳಿದ್ದು ಅಂತಾ ಆಶ್ಚರ್ಯವಾಯ್ತು...
ನಂತರ ನಾವು ಅಲ್ಲಿನ ಪ್ರಸಿದ್ಧವಾದ castle ನೋಡೋಕೆ ಹೊರ್ಟ್ವಿ.. ಅದು ಒಂದು ಒಳ್ಳೆ ಜಾಗ. ಯಾವ್ದೋ ಯುದ್ಧದಲ್ಲಿ ಹಾಳಾಗಿ ಈಗ ಜೀರ್ಣೋದ್ಧಾರದ ಕೆಲ್ಸ ನಡೀತಿತ್ತು.. ಅಲ್ಲಿಂದ Neckar ನದಿ, ಹಾಗು ಅದರ ತೀರದಲ್ಲಿರುವ Heidelberg ನಗರದ ದೃಶ್ಯ ಮನೋಹರವಾಗಿತ್ತು... ಒಂದೆರ್ಡು photos ತೆಗ್ಯೋಷ್ಟ್ರಲ್ಲಿ ನನ್ನ camera battery ಸತ್ತೊಯ್ತು.. ಆಮೇಲೆ ಆ castle ಒಳಗೆ ನೋಡ್ಕೊಂಡು, ಜಾಗ ಖಾಲಿ ಮಾಡಿದ್ವಿ...busನಲ್ಲಿ ನಮಗೆ ಅಲ್ಲೇ ಬಹಳ ವರ್ಷಗ್ಳಿಂದ ಅಲ್ಲೇ ವಾಸವಾಗಿರೋ ಒಬ್ರು ಭಾರತೀಯರು ಸಿಕ್ಕಿ shopping ಆದ್ರೆ ನೀವು Mannheimಗೆ ಹೋಗಿ, Heidelbergನಲ್ಲಿ ಎಲ್ಲಾ ಬೆಲೆ ಜಾಸ್ತಿ ಅಂದ್ರು...
ನಾವು ಸರಿ ಅಂತ main tram/bus standಗೆ ಬಂದು, Mannheimಗೆ ಹೊರ್ಟ್ವಿ...
Mannheim: Mannheim Heidelbergಗಿಂತ ದೊಡ್ಡ ನಗರ.. ಅಲ್ಲಿ ಅವತ್ತು ಪ್ರತ್ಯೊಂದು ಅಂಗ್ಡೀಲೂ discount sale ಹಾಕಿದ್ರು... ಮೊದ್ಲು ನಾವೆಲ್ರೂ ಒಂದೇ ಅಂಗ್ಡೀಗೆ ನುಗ್ಗಿದ್ವಿ... ನಾನೂ ರಾಜೇಶ್ ಅಲ್ಲೇ ಉಳ್ಕೊಂಡ್ವಿ, ಮಿಕ್ಕ ಇಬ್ರು ಬೇರೆ ಅಂಗ್ಡೀಗಳನ್ನ ನೋಡೋಕೆ ಹೊರ್ಟ್ರು...ನನ್ನ shopping ಒಂದೇ ಅಂಗ್ಡೀಲಿ ಮುಗೀತು... ಒಂದೇಳು jerkins, ಮೂರು handbags, ತಗೋಳೋಷ್ಟ್ರಲ್ಲಿ ನಂಗೆ ನನ್ನ luggage, flightನಲ್ಲಿ allow ಮಾಡೋ maximum weightಗಿಂತ ಜಾಸ್ತಿ ಆಗಿದೆ ಅಂತ ಗೊತ್ತಾಯ್ತು.. ಅಲ್ಲಿಗೆ ನಿಲ್ಸಿದೆ...
ನಾವು ಅಲ್ಲಿಂದ ಬಂದು, ಇನ್ನೊಂದ್ ಎರ್ಡ್ ಅಂಗಡಿ round ಹಾಕೊಂಡ್ ಬರೋಷ್ಟ್ರಲ್ಲಿ ಮಿಕ್ಕ ಇಬ್ರು ಬಂದಿದ್ರು.. ಅವ್ರೂ ಸುಮಾರಾಗೇ shopping ಮಾಡಿದ್ರು... ಎಲ್ಲಾ ಏನ್ ತಗೊಂಡೆ, ಎಷ್ಟಾಯ್ತು ಅಂತ ಕೇಳಿ ಮುಗ್ಸೋ ಅಷ್ಟೊತ್ಗೆ ನಮ್ಮ tram ಬಂತು... ಹೊರ್ಟ್ವಿ ಮತ್ತೆ Heidelberg ಕಡೆಗೆ...
Heidelbergಗೆ ಬಂದು ನಾವು ತಿನ್ನೋಕೆ ಏನಾದ್ರೂ ಶಾಕಾಹಾರಿ ತಿನಿಸು ಸಿಗುತ್ತಾ ಅಂತ ನೋಡಿದ್ವಿ, ಆದ್ರೆ ಪ್ರಯೋಜ್ನ ಆಗ್ಲಿಲ್ಲ... ಮನೇಲೇ ಮಾಡಿದ್ರೆ ಆಯ್ತು ಅಂದ್ಕೊಂಡ್ ಮನೆ ಕಡೆ ಹೋಗೋಕೆ tram/bus standಗೆ ಬಂದ್ರೆ ಅಲ್ಲಿ bus ಇಲ್ಲ... ಸರಿ train stationಗೆ ಅಂತ ಒಂದು tram ಹತ್ತಿದ್ವಿ... ಅಲ್ಲಿ ನಮ್ಗೆ ಇನ್ನೊಂದು ಭಾರತೀಯ ತಂಡ ಸಿಕ್ತು... ಅವ್ರೂ ಕೂಡ ರಾಜ ರಾಣಿ ಊಟ ಮಾಡೋಕೆ ಬಂದಿದ್ವಿ ಅಂದಾಗ ನಾವ್ ನಾಕೂ ಜನ ಜೋರಾಗಿ ನಕ್ಬಿಟ್ವಿ... ಅವರೆಲ್ಲ ಯಾಕೆ-ಯಾಕೆ- ಅಂತ ಮುಕ್-ಮುಖ ನೋಡ್ಕೋತಿದ್ರು...
ಅಲ್ಲಿಂದ guesthouseಗೆ ಬಂದು ಸಾಮಾನ್ ಇಟ್ಟು ಹತ್ರ ಇರೋ pizza ಅಂಗ್ಡೀಗೆ ಹೋಗಿ pizza ತಿಂದ್ವಿ...
ಇದು ಶನಿವಾರದ ಕಥೆ...
ಭಾನ್ವಾರ Black Forestಗೆ ಅಂತ ಹೊರ್ಟು train miss ಆಗಿ, ಮತ್ತೆ Heidelbergಗೆ ಹೋಗಿ ಬಂದ್ವಿ ಅಷ್ಟೇ...
ಈಗ ಕೊನೇಲಿ ಚಿಟಿಕೆ ಸುದ್ದಿ:
1. ನಮ್ಮ guesthouse ಹತ್ರ ಇರೋ pizza ಅಂಗ್ಡೀಲಿ pizza ತಯಾರು ಮಾಡೋವ್ರು 3 years experience ಇರೋ mechanical engineer. Iraq ದೇಶದಿಂದ ಬಂದಿರೋ ಈತನಿಗೆ German grammar ಬರೋಲ್ಲ ಅನ್ನೋ ಒಂದೇ ಕಾರಣದಿಂದ ಅವ್ನಿಗೆ ಇಲ್ಲಿ ತನ್ನ ಓದಿಗೆ ತಕ್ಕ ಕೆಲ್ಸ ಸಿಕ್ಕಿಲ್ಲ... ಈಗ grammar classes attend ಮಾಡ್ತಿದಾನೆ, ಆದಷ್ಟು ಬೇಗ ಈ ಕೆಲ್ಸ ಬಿಟ್ಟು ಮತ್ತೆ engineer ಆಗ್ತೀನಿ ಅಂತ ನಂಬಿಕೆ ಇಟ್ಕೊಂಡಿದಾನೆ...
2. ಭಾನ್ವಾರ ಇಲ್ಲಿ ಒಂದು ಅಂಗ್ಡೀನೂ ತೆಗ್ಯೋಲ್ಲ... ರಸ್ತೇಲಿ ಜನ ಕೂಡ ಕಮ್ಮಿ... ಒಳ್ಳೆ curfew ಹಾಕ್ದಂಗೆ ಇರುತ್ತೆ... ಎಂತೆಂಥಾ ದೊಡ್-ದೊಡ್ಡ shopping malls ಕೂಡ ಭಾನ್ವಾರ ರಜ... ಆಗ ನಂಗೆ ನಮ್ ಬೆಂಗ್ಳೂರ್ ನೆನ್ಪಾಯ್ತು... ಅಲ್ಲಿ ಹೀಗಾದ್ರೆ ಹೇಗೆ...
ಇಲ್ಲಿಗೆ ಈ ಮುಗೀತು... ನಾವು ನಿನ್ನೆ Frankfurt, ಹಾಗು ಇವತ್ತು Feldbergಗೆ ಹೊಗಿದ್ವಿ... ಅದ್ರ ಬಗ್ಗೆ ಮುಂದಿನ್ ಪತ್ರದಲ್ಲಿ ಬರೀತೀನಿ...
ಅಲ್ಲಿವರ್ಗೂ ಸಂಪರ್ಕದಲ್ಲಿರಿ....
Sreekanth

0 comments:
Post a Comment