Sunday, August 17, 2014

ಮರ್ಯಾದೆ ಪ್ರಶ್ನೆ -- My view

ಇದು ನಾನು Dramadoseನಲ್ಲಿ ಬರ್ಯೋ ಥರ ನಾಟಕ ವಿಮರ್ಶೆ ಅಲ್ಲ. ಇದು ಕೇವಲ ನಂಗೆ ಈ "ಮರ್ಯಾದೆ ಪ್ರಶ್ನೆ" ನಾಟಕದದಲ್ಲಿ ಏನು ಇಷ್ಟ ಆಯ್ತು, ಏನು ಆಗ್ಲಿಲ್ಲ ಅನ್ನೋದ್ರ ಬಗ್ಗೆ ಒಂದು ಸಣ್ಣ ಲೇಖನ ಅಷ್ಟೆ. ಈ ಲೇಖನದಲ್ಲಿ ನಂಗೆ ಸಮಾಧಾನ ಆಗೋಂಥ ಕನ್ನಡ ಪದ ಎಲ್ಲೆಲ್ಲಿ ಸಿಗ್ಲಿಲ್ವೋ ಅಲ್ಲೆಲ್ಲಾ English ಪದಾನೇ ಉಪ್ಯೋಗ್ಸಿದೀನಿ. 


ಇಷ್ಟವಾದದ್ದು:

ನಿರೂಪಣೆಯ non-linearity. ಕಥಾವಸ್ತು ಕೂಡ ಒಂಥರ ಹೊಸದಾಗೆ ಇತ್ತು. 

ಇಷ್ಟವಾಗದೇ ಇದ್ದದ್ದು:


ಸಂಭಾಷಣೆಯಲ್ಲಿನ inconsistency: "ಆಗ್ತದೆ", "ಆಗುತ್ತೆ", "ಹೌದಲ್ಲೋ", ಹೀಗೆ ಆಡು ಭಾಷೆ-ಪಠ್ಯಪುಸ್ತಕದ/ ಔಪಚಾರಿಕ ಭಾಷೆಗಳ ಕಲಸುಮೇಲೋಗರ ಸಂಭಾಷಣೆಯಲ್ಲಿತ್ತು. ಈ ನಾಟಕದಲ್ಲಿ ಕೆಲ್ವು ಪ್ರಮುಖ ಪಾತ್ರಗಳು ದಾವಣಗೆರೆ ಮೂಲದವ್ರು. ನಂಗೆ ಅನ್ಮಾನ ಬಂದು ಅದೇ ಊರಿನ ನನ್ನ ಸ್ನೇಹಿತನೊಬ್ಬನ್ನ ಕೇಳಿದ್ದಕ್ಕೆ, ಅವ್ರ ಕಡೆ "ಆಗ್ತದೆ" ಅಂತ ಉಪ್ಯೋಗ್ಸಲ್ಲ ಅಂತ ತಿಳೀತು. 

Amateur ಸಂಭಾಷಣೆ: ನಾನು ಆ ಪಾತ್ರಗಳು ಓದಿದಂಥ collegeನಲ್ಲಿ ಓದಿಲ್ಲ. ಅಥ್ವಾ ಇದ್ನ generation gap ಅಂತಾನೂ ಕರೀಬೌದು. ಆದ್ರೂ ಕೆಲ್ವು ಕಡೆ fuck ಹಾಗೂ shit ಪದಗ್ಳ್ನ ಆಸಾಂಧರ್ಭಿಕವಾಗಿ, ಅತಿಯಾಗಿ ಉಪ್ಯೋಗ್ಸಿದಾರೆ ಅನ್ಸ್ತು. 

ಬೆಳಕು: ನಮ್ family ವಿಷ್ಯಕ್ಕೆ ಬರ್ಬೇಡಿ ಅಂತ ಕೈ ಮುಂದೆ ಮಾಡ್ದಾಗ, ಬೆರ್ಳಾಗ್ಲೀ, ಕೈ ಆಗ್ಲೀ ಕಾಣ್ಸ್ತಾ ಇರ್ಲಿಲ್ಲ. ಊರ್ಮಿದೂ ಒಂದು ಸನ್ನಿವೇಶ ಹಾಗೇ ಇತ್ತು. ಜೊತೆಗೆ, ನಮ್ಮ ಬಲ್ಗಡೆ ಇದ್ದ ಕುರ್ಚಿ ಬೆಳಕಿನ ಜಾಗಕ್ಕೆ center-align ಆಗಿರ್ಲಿಲ್ಲ. ಇದು ಬೆಳಕಿನ ವಿನ್ಯಾಸದಲ್ಲಾಗಿರೋ ತಪ್ಪೋ, ಪಾತ್ರಧಾರಿಗಳ ತಪ್ಪೋ ನಂಗೊತ್ತಿಲ್ಲ.  ಅಥ್ವಾ ಎರಡೂ ಅಲ್ದೇ, Consistent error is a feature ಅನ್ನೋ ಹಾಗೆ, ಇದು ಇರೋದೇ ಹೀಗೋ ಅದೂ ಗೊತ್ತಿಲ್ಲ. 

Unprofessional ಅಂತ್ಯ: ನಾಟ್ಕ ಮುಗಿದ್ಮೇಲೆ ಪಾತ್ರಧಾರಿಗಳ ಪರಿಚಯ ಆಗ್ಲೀ, feedback mechanism ಆಗ್ಲೀ ಇರ್ಲಿಲ್ಲ. ಇದು ಬಹುಶಃ ದಿನದ ಕೊನೆಯ ಪ್ರದರ್ಶನ ಆಗಿದ್ರಿಂದ ಕೂಡ ಇರ್ಬೌದು. 

Sidewing:


ಈ ನಾಟ್ಕದ ಮೂಲ, German ಲೇಖಕ Lutz Hubner ಬರ್ದ Respect. ಇದನ್ನ ಕನ್ನಡಕ್ಕೆ ಭಾಷಾಂತರಿಸ್ದವ್ರು ಖ್ಯಾತ ನಾಟಕಕಾರ ಸುರೇಂದ್ರನಾಥ್ ಅವ್ರು. ನಾನು ಎಲ್ಲೋ ಓದಿದ ಹಾಗೆ, ಈ ನಾಟಕ ತಂಡ, ಈ ಕೃತಿಗೆ ಬದಾಲವಣೆಗಳ್ನ ಮಾಡಿ stage ಮೇಲೆ ತಂದಿದೆ. ಸುರೇಂದ್ರನಾಥ್ ಅವ್ರ version ಸಿಕ್ರೆ ಅದ್ನ ಓದಿ ಇವ್ರು ಏನೇನ್ ಬದಲಾವಣೆಗಳು ಮಾಡಿದಾರೆ ಅನ್ನೋದ್ನ ತಿಳ್ಕೋಬೇಕು. 

ಈ ನಾಟ್ಕ ನೋಡಿ ಸುಮಾರು ಒಂದು ತಿಂಗ್ಳಾಯ್ತು. ಮಾಮೂಲಾಗಿ ನಾಟ್ಕ ನೋಡಿ ಬಂದ ತಕ್ಷ್ಣನಾನೆ ಈ ಲೇಖನ ಬರ್ದಿಟ್ಟಿದ್ದೆ. ಆದ್ರೆ ನನ್ನ ಸ್ನೇಹಿತರೊಬ್ಬರ ಸ್ನೇಹಿತ ಈ ನಾಟಕದಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ ಇದ್ನ publish ಮಾಡೋಕೆ ಹಿಂದೇಟು ಹಾಕಿದ್ದೆ. ಆದ್ರೆ ಇವತ್ತು ನನ್ನ ಕೆಲ ಸ್ನೇಹಿತರ ಸಲಹೆ/ ಪ್ರೇರಣೆಯಿಂದ ಸೊಲ್ಪ fine-tune ಮಾಡಿ ಹಾಕಿದ್ದೀನಿ. 

0 comments:

Post a Comment