ಇದು ನಾನು ಇತ್ತೀಚಿಗೆ Facebookನಲ್ಲಿ ಕಂಡ wall post ಆಧಾರಿತ ಬರಹ. ಈಗ ಆ post ನನಗೆ ಕಾಣಿಸುತ್ತಿಲ್ಲ. ಆದ್ದರಿಂದ ಇದನ್ನು ನಂಬುವುದು ಬಿಡುವುದು ಓದುಗರಿಗೆ ಬಿಟ್ಟಿದ್ದು.
ಬರಹದ ಒಂದು ತುಣುಕು: "<____>ಯವರು ಸೂರ್ಯನ ಕೆಳಗಿನ ಯಾವುದೇ ವಿಷಯದ ಬಗ್ಗೆ .... "
ಇದನ್ನು ಓದಿ, "ತಗೋಳಪ್ಪ... Anything under the sun ಅನ್ನೋ English ನಾಣ್ಣುಡೀನ literal translation ಮಾಡಿ "ಸೂರ್ಯನ ಕೆಳಗಿನ ಯಾವುದೇ ವಿಷಯ" ಅಂತ ಹಾಕಿದಾರಲ್ಲ ಇವರು" ಅಂತ ನಾನು ಮನಸಲ್ಲೇ ನಕ್ಕೆ. ಜೊತೆಗೆ ನನಗೆ ಸ್ವಲ್ಪ ಆಶ್ಚರ್ಯವೂ ಆಯ್ತು. ಏಕೆಂದರೆ, ಈ ಆಭಾಸವನ್ನು ಮಾಡಿದ್ದವರು ಕನ್ನಡದ ಪರ ಹೋರಾಡುತ್ತಿರುವ ಒಬ್ಬ ಪ್ರಮುಖ ಶಕ್ತಿ. ಅಲ್ಪಜ್ಞಾನಿಯಾದ ನನಗೆ ತಿಳಿದ ಮಟ್ಟಿಗೆ ಆ ನಾಣ್ಣುಡೀಗೆ ಪರ್ಯಾಯವಾದ ನಾಣ್ಣುಡಿ ಕನ್ನಡದಲ್ಲಿ ಇಲ್ಲ.
ಅದನ್ನು ಓದಿದ ಮೇಲೆ ಇದೇ ರೀತಿ ನಾವು ಸಾಮಾನ್ಯವಾಗಿ Englishನಲ್ಲಿ ಉಪಯೋಗಿಸುವ ಇನ್ನಷ್ಟು ನಾಣ್ಣುಡಿಗಳನ್ನು ಇದೇ ರೀತಿ ಭಾಷಾಂತರ ಮಾಡಿದರೆ ಹೇಗಿರುತ್ತೆ, ಎಷ್ಟು ಹಾಸ್ಯಾಸ್ಪದವಾಗಿರುತ್ತೆ, ಅನ್ನಿಸಿತು. ಅದಕ್ಕೆ ಈ ಸಣ್ಣ ಪ್ರಯತ್ನ.
ಇದನ್ನೆಲ್ಲಾ ಓದಿದಾಗ ನನಗೆ Lewis Carollನ Through the Looking Glass ಕಥೆಯಲ್ಲಿನ Humpty-Dumpty ಪ್ರಸಂಗ ಜ್ಞಾಪಕ ಬರುತ್ತೆ. ಆ ಪ್ರಸಂಗದಲ್ಲಿ, Humpty-Dumptyಯು "Glory" ಪದಕ್ಕೆ "a nice knock-down argument" ಅನ್ನುವ ಅರ್ಥ ಕೊಟ್ಟಾಗ Alice "ಆ ಪದಕ್ಕೆ ಆ ಅರ್ಥ ಇಲ್ಲ" ಎಂದು ಆಕ್ಷೇಪಣೆ ಮಾಡುತ್ತಾಳೆ. ಆಗ Humpty-Dumptyಯು "ನಾನು ಒಂದು ಪದವನ್ನು ಉಪಯೋಗಿಸಿದಾಗ, ನಾನು ಅದಕ್ಕೆ ಯಾವ ಅರ್ಥ ಕೊಡಬೇಕೆಂದುಕೊಂಡಿದ್ದೀನೋ, ಆ ಅರ್ಥವನ್ನು ಹೊಂದುತ್ತದೆ." ಎಂದು ಅವಹೇಳನ ಮಾಡುತ್ತಾನೆ. ಆ ಪ್ರಸಂಗವನ್ನು ನೀವು ಇಲ್ಲಿ ಓದಬಹುದು.
http://www.gutenberg.org/files/12/12-h/12-h.htm#link2HCH0006

- Back to square one: ಮರಳಿ ಚೌಕ ಒಂದಕ್ಕೆ.
- Fight fire with fire: ಬೆಂಕಿಯನ್ನು ಬೆಂಕಿಯಿಂದಲೇ ಹೋರಾಡಬೇಕು. (ಕನ್ನಡ ಪರ್ಯಾಯ: ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು)
- On cloud nine: ಒಂಬತ್ತನೇ ಮೋಡದ ಮೇಲೆ.
- Raining cats and dogs: ಬೆಕ್ಕು ನಾಯಿಗಳ ಮಳೆ.
- A leopard can't change his spots: ಚಿರತೆಗೆ ತನ್ನ ಚುಕ್ಕಿಗಳನ್ನು ಬದಲಾಯಿಸಿಕೊಳ್ಳಲಾಗುವುದಿಲ್ಲ (ಕನ್ನಡ ಪರ್ಯಾಯ: ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ)
- Add fuel to the fire: ಬೆಂಕಿಗೆ ಇಂಧನ ಹಾಕು (ಕನ್ನಡ ಪರ್ಯಾಯ: ಉರಿಯೋ ಬೆಂಕಿಗೆ ತುಪ್ಪ ಸುರಿ)
- All in the same boat: ಎಲ್ಲರೂ ಒಂದೇ ದೋಣಿಯಲ್ಲಿ (ಕನ್ನಡ ಪರ್ಯಾಯ: ಎಲ್ಲರ ಮನೆ ದೋಸೇನೂ ತೂತೇ)
- Bite off more than you can chew: ಅಗಿಯಲು ಆಗುವುದಕ್ಕಿಂತ ಹೆಚ್ಚು ಕಚ್ಚು.
- Cock and Bull story: ಹುಂಜ ಮತ್ತು ಹೋರಿಯ ಕಥೆ (ಕನ್ನಡ ಪರ್ಯಾಯ: ಕಾಗಕ್ಕ ಗುಬ್ಬಕ್ಕನ ಕಥೆ)
- Cry over spilled milk: ಚೆಲ್ಲಿದ ಹಾಲಿನ ಬಗ್ಗೆ ಅಳು
- Count your chickens before they hatch: ಮೊಟ್ಟೆ ಒಡೆಯುವ ಮೊದಲೇ ಕೋಳಿ ಮರಿಗಳನ್ನು ಎಣಿಸು. (ಕನ್ನಡ ಪರ್ಯಾಯ: ಕೂಸು ಹುಟ್ಟೋಕೆ ಮುಂಚೆ ಕಡಗ ಮಾಡಿಸು.)
- On the same page: ಒಂದೇ ಪುಟದ ಮೇಲೆ
- Rome was not built in one day: ರೋಮ್ ನಗರವನ್ನು ಒಂದೇ ದಿನದಲ್ಲಿ ಕಟ್ಟಲಿಲ್ಲ.
- Last, but not least: ಕೊನೆಯದಾಗಿ, ಆದರೆ ಕನಿಷ್ಠವಾಗಿ ಅಲ್ಲ.
ಇದನ್ನೆಲ್ಲಾ ಓದಿದಾಗ ನನಗೆ Lewis Carollನ Through the Looking Glass ಕಥೆಯಲ್ಲಿನ Humpty-Dumpty ಪ್ರಸಂಗ ಜ್ಞಾಪಕ ಬರುತ್ತೆ. ಆ ಪ್ರಸಂಗದಲ್ಲಿ, Humpty-Dumptyಯು "Glory" ಪದಕ್ಕೆ "a nice knock-down argument" ಅನ್ನುವ ಅರ್ಥ ಕೊಟ್ಟಾಗ Alice "ಆ ಪದಕ್ಕೆ ಆ ಅರ್ಥ ಇಲ್ಲ" ಎಂದು ಆಕ್ಷೇಪಣೆ ಮಾಡುತ್ತಾಳೆ. ಆಗ Humpty-Dumptyಯು "ನಾನು ಒಂದು ಪದವನ್ನು ಉಪಯೋಗಿಸಿದಾಗ, ನಾನು ಅದಕ್ಕೆ ಯಾವ ಅರ್ಥ ಕೊಡಬೇಕೆಂದುಕೊಂಡಿದ್ದೀನೋ, ಆ ಅರ್ಥವನ್ನು ಹೊಂದುತ್ತದೆ." ಎಂದು ಅವಹೇಳನ ಮಾಡುತ್ತಾನೆ. ಆ ಪ್ರಸಂಗವನ್ನು ನೀವು ಇಲ್ಲಿ ಓದಬಹುದು.
http://www.gutenberg.org/files/12/12-h/12-h.htm#link2HCH0006
Sidewing:
ಈಗ ನಮ್ಮ ಕನ್ನಡ ಚಿತ್ರರಂಗದಲ್ಲಿ ಸ್ವ-ಮೇಕ್ ಚಿತ್ರಗಳಿಗಿಂತ ರೀಮೇಕ್ ಚಿತ್ರಗಳದ್ದೇ ಜಾಸ್ತಿ ಸದ್ದು ಗದ್ದಲ. ಹೀಗಿದ್ದಾಗ, ಅಕಸ್ಮಾತ್ ನಮ್ಮವರು ತೆಲುಗು-ತಮಿಳು ಬಿಟ್ಟು, English ಚಿತ್ರಗಳನ್ನು ರೀಮೇಕ್ ಮಾಡಿ, ಅದರ titleಗಳನ್ನು literal translation ಮಾಡಿದರೆ ಹೇಗಿರಬಹುದು?- Broken City: ಮುರಿದ ನಗರ
- Side Effects: ಪಕ್ಕದ ಪರಿಣಾಮಗಳು
- Top Gun: ಮೇಲಿನ ಬಂದೂಕು
- Dead Man Down: ಸತ್ತ ಗಂಡಸು ಕೆಳಗೆ
- Fast and Furious: ವೇಗವಾಗಿ ಮತ್ತು ಉದ್ರಿಕ್ತವಾಗಿ
- Dawn of Planet of Apes: ಮಂಗಗಳ ಗ್ರಹದ ಉದಯ
- The Monuments Men: ಸ್ಮಾರಕಗಳ ಗಂಡಸರು
- Need for Speed: ವೇಗದ ಅವಶ್ಯಕತೆ
- Edge of Tomorrow: ನಾಳೆಯ ತುದಿ
- This is Where I Leave You: ನಾನು ನಿನ್ನನ್ನು ಇಲ್ಲಿಯೇ ಬಿಡುವುದು
- The Equalizer: ಸಮಗಾರ
- A Good Day to Die Hard: ಕಷ್ಟಪಟ್ಟು ಸಾಯಲು ಒಳ್ಳೆಯ ದಿನ.
0 comments:
Post a Comment